Nice bhavageete to sing to a baby, set to tune in the movie Shara Panjara by Vijay Bhaskar and the amazing Anshuman KR here
-ಬೆಳಗು-
ಮೂಡಲ ಮನೆಯಾ ಮುತ್ತಿನ ನೀರಿನ ಎರಕ$ವ ಹೊಯ್ದಾ ನುಣ್ಣ-ನ್ನೆರಕsವ ಹೊಯ್ದಾ ಬಾಗಿಲ ತೆರೆದೂ ಬೆಳಕು ಹರಿದೂ ಜಗವೆಲ್ಲಾ ತೊಯ್ದಾ ಹೋಯ್ತೋ-ಜಗವೆಲ್ಲಾ ತೊಯ್ದಾ.
ರತ್ನದ ರಸದಾ ಕಾರಂಜೀಯೂ ಪುಟಪುಟನೇ ಪುಟಿದು ತಾನೇ-ಪುಟಪುಟನೇ ಪುಟಿದು ಮಘಮಘಿಸುವಾ ಮುಗಿದ ಮೊಗ್ಗೀ ಪಟಪಟನೇ ಒಡೆದು ತಾನೇ-ಪಟಪಟನೇ ಒಡೆದು.
ಎಲೆಗಳ ಮೇಲೇ ಹೂಗಳ ಒಳಗೇ ಅಮೃತsದ ಬಿಂದು ಕಂಡವು-ಅಮೃತ$ದ ಬಿಂದು ಯಾರಿರಿಸಿಕರುವರು ಮುಗಿಲsಮೇಲಿಂ- ದಿಲ್ಲಿಗೇ ತಂದು ಈಗ-ಇಲ್ಲಿಗೇ ತಂದು.
ತಂಗಾಳಿಯಾ ಕೈಯೊಳಗಿರಿಸೀ ಎಸಳೀನಾ ಚವರಿ ಹೂವಿನ-ಎಸಳೀನಾ ಚವರಿ ಹಾರಿಸಿಬಿಟ್ಟರು ತುಂಬಿಯ ದಂಡು ಮೈಯೆಲ್ಲಾ ಸವರಿ ಗಂಧಾ-ಮೈಯೆಲ್ಲಾ ಸವರಿ.
ಗಿಡಗಂಟೆಯಾ ಕೊರಳೊಳಗಿಂದ ಹಕ್ಕೀಗಳ ಹಾಡು ಹೊರಟಿತು-ಹಕ್ಕೀಗಳ ಹಾಡು. ಗಂಧರ್ವರಾ ಸೀಮೆಯಾಯಿತು ಕಾಡಿನಾ ನಾಡು ಕ್ಷಣದೊಳು-ಕಾಡಿನಾ ನಾಡು.
ಕಂಡಿತು ಕಣ್ಣು ಸವಿದಿತು ನಾಲಗೆ ಪಡೆದೀತೀ ದೇಹ ಸ್ಪರ್ಶಾ-ಪಡೆದೀತೀ ದೇಹ. ಕೇಳಿತು ಕಿವಿಯು ಮೂಸಿತು ಮೂಗು ತನ್ಮಯವೀ ಗೇಹಾ ದೇವರ-ದೀ ಮನಸಿನ ಗೇಹಾ.
ಅರಿಯದು ಅಳವು ತಿಳಿಯದು ಮನವು ಕಾಣ$ದೋ ಬಣ್ಣಾ ಕಣ್ಣಿಗೆ-ಕಾಣsದೋ ಬಣ್ಣಾ ಶಾಂತೀರಸವೇ ಪ್ರೀತಿಯಿಂದಾ ಮೈದೋರಿತಣ್ಣಾ ಇದು ಬರಿ-ಬೆಳಗಲ್ಲೋ ಅಣ್ಣಾ
1932ರಲ್ಲಿ ಪ್ರಕಟಗೊಂಡ ಬೇಂದ್ರೆಯವರ ‘ಗರಿ’ ಕವನ ಸಂಕಲನದಲ್ಲಿದೆ. ಅದರಲ್ಲಿ ಮೊದಲ ಕವನವಾದ ಈ ಕವಿತೆಯು ರಚನೆಗೊಂಡದ್ದು 1919ರಲ್ಲಿ
Translation by GS Amur
The Eastern house shone with pearl-water Gilded smoothly all over: Flooding through the open doors Light drenched the entire earth.
The liquid diamond rushed through the fountain Rushed of it’s own accord; The sweet-scented buds opened up, Opened of their own accord.
On the leaves, inside the flowers, appeared Drops of amrita, amrita drops. Who brought them here from above the sky, Who put them here, now?
They placed the petal brush In the hands of the cool breeze And smeared with scented pollen, The bees are let loose in the sky.
From the throats of trees and bushes Rose the songs of birds, And the wild earth was transformed In an instant, into the land of Gandharvas.
The eye saw, the tongue tasted, This my body experienced touch, The ear heard, the nose smelt, My mind, temple of God, forgot itself in ecstasy.
Immeasurable is space, beyond the grasp of the mind, The colour, unseen, is hidden from the eye, Only the rasa of peace bodies forth in love, This, my brother, is no mere dawn.